Friday, September 12, 2008

ಮತ್ತೊಂದು ಕನಸು..

ಅಲ್ಲೊಂದು ಉದ್ಯಾನವನದ ನೂರಾರು ಗಿಡ, ಮರಗಳ ನಡುವೆ 'ಆ' ಗಿಡ ತನ್ನ ಅಂದಕ್ಕೆ ತಾನೆ ಮಾರು ಹೋದಂತಿತ್ತು. ತನ್ನಲ್ಲರಳಿದ ಹವಳದ ಬಣ್ಣದ ಹೂವನ್ನು ಕಂಡು ಹಿರಿಹಿರಿ ಹಿಗ್ಗುತ್ತಿತು...ತನ್ನ ಸುತ್ತ ಮುತ್ತಲಿದ್ದ ಗಿಡ-ಮರಗಳಿಗೆ ತನ್ನ ಅಂದವನ್ನು ವಿವರಿಸುತ್ತಾ ಹೆಮ್ಮೆ ಪಡುತ್ತಿತ್ತು. ಅಲ್ಲಿದ್ದ ಎಲ್ಲರಿಗೂ 'ಅವಳ ಸಮಾನವಿಲ್ಲ' ಎಂಬ ಭಾವನೆ ಅಚ್ಚೊತ್ತಿ ಬಿಟ್ಟಿತ್ತು.
ಈ ರೀತಿ ಆ ಗಿಡ ಹಾಡಿ, ಹೊಗಳಿಕೊಳ್ಳುತ್ತಿದ್ದುದನ್ನು ಅದರ ಪಕ್ಕದಲ್ಲೇ ಭೂಮಿಯ ಬೆಚ್ಚಗಿನ ಗರ್ಭ ಸೀಳಿ ಆಗತಾನೇ ಹೊರಬಂದು, ತಲೆಯೆತ್ತಿ ತನ್ನ ಬಂಧುಗಳನ್ನು ನೋಡುತ್ತಿದ್ದ 'ಮೊಳಕೆ'ಯೊಂದು ನೋಡಿತು. ಒಮ್ಮೆ ನಕ್ಕು ಅದು ಸುಮ್ಮನಾಯಿತು. ಹೀಗೇ ಒಂದು ದಿನ ಅದು ಸು೦ದರಿ ಗಿಡದ ಬಳಿ ಅದು ಕೇಳಿತು, "ಗೆಳತೀ, ನೀನು ಸುಂದರಿ ಎನ್ನುವುದು ಸತ್ಯವಾದ ವಿಷಯವೇ. ಆದರೆ ನೀನೇ ಬಿಡುವ ಆ ಹೂವಿನ ಭಾರ ತಾಳಲಾರದೇ ನೀನೇಕೆ ನೆಲವನ್ನೇ ನೋಡುತ್ತಿರುತ್ತೀಯಾ? ಕತ್ತೆತ್ತಿ ಒಮ್ಮೆ ನಿನ್ನ ಅಣ್ಣ೦ದಿರನ್ನು ನೋಡು... ಒಮ್ಮೆ ಮಾತ್ರ..." ಆ 'ಸುಂದರಿ' ಗಿಡ ಪೆಚ್ಚಾಗಿ ಹೋಯಿತು. ಏನೇ ಮಾಡಿದರೂ ಬಗ್ಗಿದ ಹೂವಿನ ತಲೆ ಮೇಲೆತ್ತಲಾಗಲಿಲ್ಲ! ತನ್ನ ದುರ್ಬಲತೆ ಕಂಡು ಕುಗ್ಗಿ ಹೋಯಿತು...

ಹೀಗಿರುವಾಗ ಆ ಮೊಳಕೆಯ ಪುಟ್ಟ ದೊಡ್ಡವನಾಗಿ ಬೆಳೆದ. ಸುಂದರಿಯ ಪಕ್ಕದಲ್ಲೇ ಧೃಢವಾಗಿ ನಿಂತ. ಅಲ್ಲೇ ಅಡ್ಡಾಡುತ್ತಿದ್ದ ಮಾಲಿ ಅ 'ಸುಂದರಿ' ಗಿಡದ ತಲೆಯೆತ್ತಿ 'ಪುಟ್ಟು' ಗಿಡಕ್ಕೆ ಬಿಗಿದ..ಈಗ ಸುಂದರಿ ತಲೆಯೆತ್ತಿ ನೋಡಿದಳು...ತನ್ನ ಅಣ್ಣ೦ದಿರನ್ನು, ಹಾಗೆಯೇ ಆ 'ಪುಟ್ಟ'ನನ್ನು. ಆಗ ಪುಟ್ಟ ಹೇಳಿದ, "ನೀನೀಗ ನಿಜವಾದ 'ಸುಂದರಿ'.ನಿನ್ನ ಈ ಅಂದವಾದ 'ಮೌನ' ನಿನ್ನನ್ನು ಸುಂದರಗೊಳಿಸಿದೆ." ಸುಂದರಿ ಒಮ್ಮೆ ನಕ್ಕಳು. ಸಂತಸದಿಂದ ಇಡೀ ಉದ್ಯಾನವನವೇ ಮುಗುಳ್ನಕ್ಕಿತು...

('ಶೋಧ'ದ ಮತ್ತೊಂದು ತುಣುಕು. ೨೦೦೪ರಲ್ಲಿ ಮೂಡಿದ ಕನಸು. ನನ್ನ ಪುಸ್ತಕದಲ್ಲಿ ದಾಖಲಾಗಿದೆ..)
~ಸುಷ್ಮ ಸಿ೦ಧು.

(image courtesy-web)

8 comments:

supraja said...

ಆತ್ಮ ವಿಶ್ವಾಸದಿ೦ದೊಡಗೂಡಿದ ಸೌ೦ದರ್ಯದ ಮಹತ್ವವನ್ನು ಸಾರುವ 'ಮತ್ತೊ೦ದು ಕನಸು ' ಚಿ೦ತನ ಯೋಗ್ಯವಾಗಿದೆ . ಮತ್ತಷ್ಟು ಇ೦ಥಹ ಕನಸುಗಳಿಗಾಗಿ ಕಾಯುತ್ತಿರುವ ...
~ಸುಪ್ರಜ

Sushma Sindhu said...

ಹಾಯ್ ಸುಪ್ರಜಾ,
ನಿಮ್ಮ ಪ್ರೋತ್ಸಾಹದಾಯಕ feed back ಗೆ ತುಂಬಾ thanx :)

sunaath said...

ಸುಷ್ಮಾಸಿಂಧುರವರೆ,
ನಿಮ್ಮ ಕನಸುಗಳು ತುಂಬಾ ಸ್ವಾರಸ್ಯಕರವಾಗಿವೆ.ಮನಃಶಾಸ್ತ್ರದ ಬಗೆಗೆ ನನಗಿರುವ ತಿಳಿವು ಕೇವಲ ಪ್ರಾಥಮಿಕ.ಆದರೆ, ನಿಮ್ಮ ಕನಸುಗಳು ಹಾಗು ಅವುಗಳ ವಿವರಣೆ ನನಗೆ ಕುತೂಹಲ ಹುಟ್ಟಿಸುತ್ತಿದೆ.
ನೀವು ಬರೆದ ಪುಸ್ತಕ ಎಲ್ಲಿ ಸಿಗುತ್ತದೆ, ದಯವಿಟ್ಟು ತಿಳಿಸಿರಿ.

sunaath said...

ಸುಷ್ಮಾಸಿಂಧು,
ಕನಸುಗಳ ಬಗೆಗೆ ಇರುವ blog ಬಹುಶಃ ನಿಮ್ಮದೊಂದೇ ಇರಬೇಕು. ನಿಮ್ಮ ಕನಸುಗಳು ಅ-ಸಾಧಾರಣವಾಗಿರುವದು ಕುತೂಹಲಕಾರಿಯಾಗಿದೆ.
ದಯವಿಟ್ಟು ನಿಮ್ಮ ಪುಸ್ತಕ ದೊರೆಯುವ ವಿಳಾಸ ತಿಳಿಸುತ್ತೀರಾ?

Sushma Sindhu said...

Hi ಸುನಾಥ್ ರವರೆ ,
ನಿಮ್ಮ ಆಸಕ್ತಿಗೆ ಧನ್ಯವಾದಗಳು. ನೀವು ನಿಮ್ಮ ವಿಳಾಸವನ್ನು ನನ್ನ id ಗೆ mail ಮಾಡುವಿರಾದರೆ ಪುಸ್ತಕವನ್ನು ನಾನೇ ಕಳುಹಿಸುತ್ತೇನೆ.
my id- sushmasindhu@gmail.com
~ಸುಷ್ಮ ಸಿ೦ಧು.

shivu K said...

ಸಿಂಧು ಮೇಡಮ್,
ನಿಮ್ಮ ಕನಸು ಮತ್ತು ಕಲ್ಪನೆ ಸೂಪರ್! ಅದೆಷ್ಟು ಚೆನ್ನಾಗಿ ಕಲ್ಪಿಸಿಕೊಳ್ಳುತ್ತೀರಿ...ಬ್ಲಾಗ್ ಲೋಕದಲ್ಲಿ ಕನಸು ಕಾಣುವುದರಲ್ಲಿ ನೀವು ದಿ ಬೆಸ್ಟ್ !

shivu K said...

ಆಹಾಂ! ನಿಮ್ಮ ಪುಸ್ತಕ ನನಗೂ ಒಂದು ಬೇಕು. ನನ್ನ ವಿಳಾಸವನ್ನು ನಿಮಗೆ ಮೇಲ್ ಮಾಡುತ್ತೇನೆ. ದಯವಿಟ್ಟು ಕಳಿಸಿ....
ಶಿವು.

Sushma Sindhu said...

ಶಿವುರವರೆ,
ಮತ್ತೊಮ್ಮೆ ಧನ್ಯವಾದಗಳು.
ನನ್ನ id- sushmasindhu@gmail.com ಗೆ ತಮ್ಮ ವಿಳಾಸ ಮೇಲ್ ಮಾಡಿ. ಪುಸ್ತಕದಲ್ಲಿ ನನ್ನ ಮೊದಲೆರಡು ವರುಷಗಳಲ್ಲಿ ಬರೆದಿಟ್ಟಿದ್ದ ಕನಸುಗಳು ಇವೆ. ಇದಾಗಲೇ ನನ್ನ ಕನಸುಗಳಿಗೆ ಐದನೇ ವರುಷ ತುಂಬುತ್ತಿದೆ:)

ಅಲ್ಲದೆ ನನ್ನ ಕನಸುಗಳ ಹಾಗೂ ಪುಸ್ತಕದ ಸ೦ಕ್ಷಿಪ್ತ ವಿಶ್ಲೇಷಣೆಯನ್ನು ಶ್ರೀ ಸುನಾಥ್ ಕಾಕಾ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು. ಸಾಧ್ಯವಾದಾಗ ಒಮ್ಮೆ ಈ ಲಿಂಕನ್ನು ಹಿ೦ಬಾಲಿಸಿ.
http://sallaap.blogspot.com/2008_10_01_archive.html