ನನ್ನ 'ಕನಸ'ಲೋಕವನ್ನು ಹೊಸದಾಗಿ ಕಾಣುತ್ತಿರುವಿರಾದರೆ, ಒಮ್ಮೆ ಹಿ೦ದಿನ ಪೋಸ್ಟುಗಳತ್ತ ಇಣುಕಿ ನೋಡಿ ಇದರತ್ತ ಬನ್ನಿ :)
"ಸರಿ, ಹೀಗೆ ಕನಸು ಕಾಣುವುದೆ೦ದರೇನು? ಕನಸು ಹೀಗಿರುವುದು ಹೇಗೆ ಸಾಧ್ಯ?" (ಚಿತ್ರದಲ್ಲಿರುವ೦ತಲ್ಲ!!)
ಇಲ್ಲಿ ನಾನ್ಯಾವ 'ಕನಸಿನ' ಕುರಿತಾದ ವೈಜ್ಞಾನಿಕ ಅವಲೋಕನವನ್ನೂ ತೆರೆದಿಡುತ್ತಿಲ್ಲ. ಬದಲಾಗಿ ನಾನು ಈ ಐದು ವರ್ಷಗಳಿಂದ ಪದೇ ಪದೇ ಕೇಳಲ್ಪಟ್ಟಿರುವ FAQ ಗಳ ಉಪಟಳದ ಸಣ್ಣ ಪರಿಚಯ ನೀಡುತ್ತಿದ್ದೇನೆ. ಈ 'ಕನಸು' ಎಂಬ ಪದದ ಅಕ್ಷರಶಃ ಅರ್ಥ ನಮ್ಮಲ್ಲಿ ಸಿಕ್ಕಾಪಟ್ಟೆ ಸಂಧರ್ಭಕ್ಕನುಗುಣವಾಗಿ ಮಾರ್ಪಾಡಾಗಿರಲ್ಪಟ್ಟಿರುವುದೇ ನನ್ನೆಲ್ಲ ಸಂಕಷ್ಟಗಳ ಮೂಲ! ಕನಸುಗಳು ಬರುತ್ತವೆ, ಹೋಗುತ್ತವೆ. ಕೆಲವು ಒ೦ದರಿ೦ದೊ೦ದು ದೃಶ್ಯಕ್ಕೆ ಸ೦ಭ೦ಧವಿರುವ೦ತವಾಗಿರುತ್ತವೆ, ಇನ್ನುಳಿದವು ತೀರಾ ಪೆದ್ದುಪೆದ್ದಾಗಿಯೋ, ತಮಾಷೆಯಾಗಿಯೋ, ಭಯಾನಕ ಅಥವಾ ಚಿಂದಿ ಚಿತ್ರನ್ನವಾಗಿಯೋ ಒಂದಷ್ಟು ಹೊತ್ತಿದ್ದು ಅತ್ತಸರಿಯುತ್ತವೆ. ಇಂತಹ ಅನೇಕಾನೇಕ ಕನಸುಗಳ ನಡುವೆಯೂ ನನಗೆ ಒಮೊಮ್ಮೆ ಒ೦ದರಿ೦ದೊ೦ದು ದೃಶ್ಯಕ್ಕೆ ಲಿಂಕ್ ಇರುವ೦ತಾ, ಸಂಭಾಷಣೆಯೇ ಪ್ರಧಾನವಾಗಿರುವ, ತಲೆಯೊಳಹೊಕ್ಕ ವಿಚಾರವೊ೦ದು ಕಲ್ಪನೆಯ ಲಯಕ್ಕೆ ಸಿಲುಕಿ ಹಾಗೇ ಉದ್ದುದ್ದವಾಗಿ, ಮೊದಲು-ಕೊನೆ ಎಲ್ಲವನ್ನೊಳಗೊ೦ಡಾಗ ದೊರೆಯುವ ಸಿದ್ಧ ಮಾದರಿಯ೦ತೆ ಮೂಡುವ ಕನಸುಗಳು, ಕೆಲ ಗಂಟೆ, ದಿನ or ಕೆಲವೊಮ್ಮೆ ಅಮ್ಮನ ಬಳಿ ಹೇಳಿ ರೆಕಾರ್ಡ್ ಮಾಡುವವರೆಗಷ್ಟೇ ಇದ್ದು ಆಮೇಲೆ ಕರುಹೂ ಇಲ್ಲದೇ ಮಾಸಿಹೋಗಿ ನನಗೆ ಆಶ್ಚರ್ಯ, ಗಾಬರಿ, ತೃಪ್ತಿ, ಸಂಕಟ, ತೊಂದರೆ ಎಲ್ಲವನ್ನೂ ತ೦ದಿಕ್ಕುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ದಾಖಲಿಸಿ ಎಲ್ಲರೊಡನೆ ಹ೦ಚಿಕೊಳ್ಳಬೇಕೆ೦ಬ ಉದ್ದೇಶವೊ೦ದು ತಲೆ ಹೊಕ್ಕಾಗಿನಿ೦ದ ಅದನ್ನು ಅಲ್ಲಿ೦ದಿಳಿಸಲು ಪ್ರತಿಷ್ಠಿತ 'ದುಷ್ಟ ಶಕ್ತಿಗಳು'(!) ವಿನಯ, ವಿಶ್ವಾಸಭರಿತ ಪ್ರತಿಕ್ರಿಯೆಗಳಿ೦ದ ಉಪಟಳ ನೀಡುತ್ತಿರುವುದರಿ೦ದ ಬೇಸತ್ತ ನಾನೂ, ನನ್ನ ಬ್ಲಾಗೂ ತೆವಳುತ್ತಲೇ ಸಾಗಿದ್ದೇವೆ !!
ನಮ್ಮವರು ಸಾಕ್ಷ್ಯಾಧಾರ, ಪುರಾವೆಗಳಿಲ್ಲದೇ ಸಾಧಾರಣವಾಗಿ ಏನನ್ನೂ ನಂಬುವುದಿಲ್ಲ ( *note- ಕ್ಷಮಿಸಿ, ಪವಾಡಗಳ ವಿಷಯದಲ್ಲಿ ಈ ಹೇಳಿಕೆ ಅನ್ವಯವಾಗುವುದಿಲ್ಲ!) ಹೀಗಾಗಿ ನಾನು ನನ್ನ ಕನಸಿನ mechanism ಅನ್ನು ಕೆಲ 'ಆಯ್ದ ವ್ಯಕ್ತಿ'ಗಳಿಗೆ(ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಹೇಳುತ್ತಾ ಹೋದರೆ ಇನ್ನೊಂದು ಬ್ಲಾಗೇ ಬೇಕಾಗಬಹುದು!) ವಿವರಿಸಲು ಹೋದರೂ "ಇದು ಹೇಗೆ ಕನಸು ಹೀಗಿರಲು ಸಾಧ್ಯ?" ಎಂಬ ಪ್ರಶ್ನೆಗಳು ತೆರೆದುಕೊಳ್ಳುತ್ತವೆ. ಹಾಗೆಂದು ಅವರ ಸಮ್ಮುಖದಲ್ಲೇ ಒಂದು ಕನಸನ್ನು ಆಹ್ವಾನಿಸಿಕೊ೦ಡು "ಒಹ್! ಬಂತು ಬಂತು ಕನಸು, ನೋಡ ಬನ್ನಿ!" ಎನ್ನಲು ಸಾಧ್ಯವೇ!? ನಿಜ, ಯಾರಿಗಾದರೂ ಈ ಕುತೂಹಲ ಸಹಜವೇ. ಆಗಾಗ ನನಗೇ ಹಾಗೆನಿಸುತ್ತಲೂ ಇರುತ್ತದೆ! ಆದರೆ ನನ್ನೆಲ್ಲ ಅರ್ಥಮಾಡಿಸಲು ನಡೆಸಿದ ಪರಿಶ್ರಮದ ನಂತರವೂ ಅದು ತಣಿಯುವುದೇ ಇಲ್ಲವಲ್ಲ! ಆಗ ಸಹಜವಾಗೇ, 'ಈ ಕನಸ ಸಹವಾಸ ಸಾಕು' ಎಂದೆನಿಸಲು ಈ ಪ್ರಕ್ರಿಯೆ ನನ್ನ ಕೈ ( or ತಲೆ?) ಮೀರಿದ್ದಾದ್ದರಿ೦ದ 'ಇವನ್ನು ದಾಖಲಿಸುವುದನ್ನು ಇಂದೇ ಬಿಟ್ಹಾಕಿಬಿಡಬೇಕು' ಎಂದೆನಿಸುವ ಮಹತ್ವಾಕಾಂಕ್ಷೆಯೇನಾದರೂ ಇವರುಗಳ 'ಜಾಣ ಪೆದ್ದುತನ'ದ ಹಿ೦ದಿರಬಹುದೇ? ಎನ್ನುವ೦ತಹ ದೂ(ದು?)ರಲೋಚನೆಯೂ ಮೂಡದೇ ಇರದು!
ನಮ್ಮ ಎಚ್ಚರ ಸ್ಥಿತಿಯಿ೦ದ ನಾವು ದೂರ ಸರಿದು ವಿರಮಿಸಿದಾಗ, 'ಕಾವಲುಗಾರನ ಕಣ್ತಪ್ಪಿಸಿ' ಜರುಗಿದ ಆಲೋಚನೆಯೊ೦ದು ದೃಶ್ಯವಾಗಿ (ಕೆಲ ಸಂಧರ್ಭಗಳಲ್ಲಿ) ಕಣ್ಣಮುಂದೆ ತೇಲಿ ಬರುವುದೆಂದರೆ? ಅದು ಎ೦ತಹ ಕನಸೇ ಆಗಿರಲಿ. ನಮ್ಮ ನಿಯಂತ್ರಣಕ್ಕೆ ಸಿಲುಕದೆ ಘಟಿಸುವ೦ತಹುದು ತಾನೇ? ಇಂತಹ ಅಚ್ಚರಿಯೆನಿಸುವ 'ಮೆದುಳ ಮಾಯೆ'ಯನ್ನು ತೀರಾ ನಿರಾಸಕ್ತಿಯಿ೦ದ ನೋಡುವ ಮನಸ್ಸುಗಳನ್ನು ನಮ್ಮ ಸುತ್ತಲೂ ಕನಸಿನ ಜೊತೆಗೆ ಹೆಣೆದುಕೊಂಡಿರುವ ಭಯ ಮತ್ತು ಮೂಢನ೦ಬಿಕೆಗಳು ಈ ವಿಚಾರದಲ್ಲಿ ನಿರ್ಲಿಪ್ತವನ್ನಾಗಿಸುತ್ತಿವೆಯೋ ತಿಳಿಯದು.
ಆದರೆ ಇವೆಲ್ಲವುಗಳ ನಡುವೆ 'ಸ್ವದೇಶೀ' ಕಾರ್ಯಚಟುವಟಿಕೆಗಳು ಅಂತರ್ಜಾಲದಲ್ಲಿ ಕಣ್ಣಿಗೆ ಬೀಳದ ಕಾರಣ (ತಿಳಿದಿದ್ದರೆ ದಯಮಾಡಿ ತಿಳಿಸಿ) 'ವಿದೇಶಿ ನೆಲ'ದ ಅಪ್ಪಟ ಕನಸುಗಾರರ ಗುಂಪೊಂದರ ಬಳಿ ಈಗ್ಗೆ ಒಂದು ವರುಷದಿಂದ ಕನಸನ್ನು ಹ೦ಚಿಕೊಳ್ಳುತ್ತಿದ್ದೇನೆ. ಅಲ್ಲಿ ಜರುಗುವ ಕನಸಿನ ಅಧ್ಬುತ ಅವಲೋಕನಗಳು, ಪಕ್ಕಾ unusual ಆಗಿ ಗೋಚರಿಸುವ ಈ ಕನಸುಗಳನ್ನು ಹೊತ್ತು ಅಲೆಯುತ್ತಿರುವ ನನ್ನ ಮತ್ತಷ್ಟು ಕಷ್ಟ ಕೋಟಲೆಗಳು, ಕನಸಿನೊಡನೆ ನೆಲೆಸಿರುವ ಬೆಚ್ಚನೆಯ ಸ೦ತಸದ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.
(image courtesy-web)
14 comments:
ಮುದ್ದು ಸುಷ್ಶು,
'ಹೀಗೂ ಕನಸುಗಳಿರುತ್ತವೆಯೇ?' ಎಂದು ಆಶ್ಚರ್ಯಪಡುವ೦ತಾಗಿತ್ತು ನಿನ್ನ ಮೊದಲ ಕನಸನ್ನು ಕೇಳಿದಾಗ ಅಥವಾ ಕಂಡು ನನ್ನದಾಗಿಸಿಕೊಂಡಾಗ! ನಿಜಕ್ಕೂ ಎಂಥ ಸಂಭ್ರಮ, ಸಡಗರ! ಈರೀತಿಯ ವಿಶಿಷ್ಟ ಕನಸುಗಳನ್ನು ಎಲ್ಲರೂ ಓದುವಂತಾಗಬೇಕು, ಅವರ ಪ್ರೋತ್ಸಾಹದಿಂದ ನಿನಗೆ ನೀನು ಕಾಣುವ ಅದ್ಬುತ ಲೋಕವನ್ನು ತೆರೆದಿಡಲು ಸ್ಪೂರ್ತಿ ಸಿಗಬೇಕು ಎನ್ನುವ ನನ್ನ ಕನಸು ಎಂದು ನನಸಾಗುವುದೋ ಎಂದು ಕಾಯುತ್ತಿದ್ದೇನೆ. ನಿನ್ನ ಭವ್ಯ ಕನಸುಗಳಿಗೆ ಸದಾ ನನ್ನ ಸ್ವಾಗತ.
ಅಮ್ಮ
ಸುಷ್ಮಾಸಿಂಧು,
ನಿನ್ನ ಹೊಸ ಹೊಸ ಕನಸುಗಳಿಗಾಗಿ ಸದಾ ಕಾಯುತ್ತಿರುತ್ತೇನೆ.
ಕನಸಲ್ಲೂ ಕ್ಲಾಸ್ ಕನಸು, ಮಾಸ್ ಕನಸು, ಕೆಟ್ಟ ಕನಸು, ಒಳ್ಳೆಯ ಕನಸು ಇರುತ್ತೆ ಅಂತ ಯಾರೋ ಹೇಳಿದ್ದರು. ನಿದ್ದೆ ಬಂದಾಗ ಕನಸು ಕಾಣಲೇ ಬೇಕು..
ಅಬ್ದುಲ್ ಕಲಾಂ ಹೇಳಿದ್ದರು ತಾನೇ ಕನಸ ಕಾಣಿ.
ಸುಷ್ಮ,
ಸದ್ಯದಲ್ಲೆ ನನ್ನ ಬ್ಲಾಗಿನಲ್ಲಿ ಕನಸಿನ ಬಗ್ಗೆ ಸಂಶೋಧನೆ ನಡೆಸ ಬೇಕೆಂದಿದ್ದೆ. ಆದರೆ ಯಾಕೋ ಬೇಡ ಅನ್ನಿಸಿತು. ಮುಂದಿನ ಲೇಖನಗಳಲ್ಲಿ ನಾ ಕಂಡ ಕನಸನ್ನು ಬರೆಯಲಿದ್ದೇನೆ.
ಕನಸು ಸಾಕಾರಗೊಳ್ಳಲಿ ಸುಷ್ಮಾ...
-ತುಂಬುಪ್ರೀತಿ,
ಚಿತ್ರಾ
ಸಿಂಧು ಮೇಡಮ್.
ಅಬ್ಬಬ್ಬಾ !! ನನಗೆ ನಿಮ್ಮ ಕನಸನ್ನು ಅರ್ಥಮಾಡಿಕೊಳ್ಳಲು ಎರಡೆರಡು ಸಾರಿ ಓದಿಕೊಳ್ಳಬೇಕಾಯಿತು. ಕೊನೆಗೆ ನೀವು ಕನಸಿನ ಹಿಂದೆ ಬಿದ್ದು ಅದರ ಬಗೆಗಿನ ಪಯಣವೆಲ್ಲಾ ತಿಳಿಯಿತು. ನಿಮ್ಮ ಕನಸು ಚೆಂದವಾಗಲಿ, ಸಾಕಾರವಾಗಲಿ, ಅದರ ಪ್ರಯಾಣ ಸುಗಮವಾಗಲಿ ಎಂದು ಹಾರೈಸುತ್ತೇನೆ.
ಅಮ್ಮ!
ಅಮ್ಮ ನಿನ್ನ ಕನಸನ್ನು ನನ್ನ ಬ್ಲಾಗಿಗೆ ಬ೦ದು ತೆರೆದಿಟ್ಟಿದ್ದೀಯಾ. ಏನು ಹೇಳಬೇಕೋ ತಿಳಿಯುತ್ತಿಲ್ಲ. ಒ೦ದ೦ತೂ ಹೇಳಲೇಬೇಕು. ಯಾರು ಏನೇ ಅ೦ದರೂ ನನ್ನ ಕನಸನ್ನು ಆಲಿಸುತ್ತಾ, ಮಗಳು ಎನ್ನುವುದಕ್ಕಿಂತಲೂ ಹೆಚ್ಚಿನ ಸ್ಥಾನ ನೀಡಿರುವುದಕ್ಕೆ ಏನು ಪ್ರತಿಕ್ರಯಿಸಬೇಕೆನಿಸುವುದೋ ಅದನ್ನು ನಿನಗೆ ನಿನ್ನ ಬಳಿಯೇ ಬ೦ದು ಒಪ್ಪಿಸುವೆ :)
~ ನಿನ್ನ, ಸುಶ್ಶು :)
@ಸುನಾಥ್ ಕಾಕಾ, ನಿಮ್ಮ ಇ೦ತಹ ಆತ್ಮೀಯ ಮಾತುಗಳೇ ನನಗೆ ನನ್ನ ರೆಕಾರ್ಡೆಡ್ ಸರಕಿನಿ೦ದ, ಎಲ್ಲಿಯೋ ಗೀಚಿಟ್ಟ ಹಾಳೆಯಿ೦ದ ಕನಸನ್ನೆತ್ತಿ ಒ೦ದೆಡೆ ಜೋಡಿಸಲು ಪ್ರೇರೇಪಿಸುತ್ತಿವೆ ಅನ್ನುವುದು ಖ೦ಡಿತ ಅತಿಶಯೋಕ್ತಿಯಲ್ಲ. ಧನ್ಯವಾದಗಳು ..
@ ಹರೀಶ್ ರವರೆ ಧನ್ಯವಾದಗಳು. 'ಕಾಣುವ' ಕನಸು ಹಾಗೂ 'ಮೂಡುವ' ಕನಸಿನ mechanism ನಲ್ಲಿ ಸಾಕಷ್ಟು ಅ೦ತರವಿದೆ ಎ೦ದು ಭಾವಿಸುತ್ತೇನೆ. ಕ್ಲಾಸ್ ಆಗಲೀ, ಮಾಸ್ ಆಗಲೀ ನಾವಂತೂ ಅದಕ್ಕೆ ಹೊಣೆಗಾರರಾಗಿರುವಿದಿಲ್ಲವಲ್ಲ. ನಿದ್ದೆ ಬ೦ದಾಗ ಕನಸು ಬರಲೇ ಬೇಕೆಂದಿಲ್ಲ ಅಲ್ಲವೇ?
ಹ್ಹಾ೦, ಅಬ್ದುಲ್ ಕಲಾಮರ ಆ ಹೇಳಿಕೆ ತುಂಬಾ ಅದ್ಬುತವಾದುದು. ಮತ್ತದು ನನ್ನ ಫೇವರಿಟ್ ಗಳಲ್ಲೊಂದು.ಬರುತ್ತಿರಿ
@ ಅ೦ತರ್ವಾಣಿ, ನಾನೂ ಸದ್ಯದಲ್ಲೇ ಕನಸನ್ನು ವಿಶಿಷ್ಟವಾಗಿ ಅವಲೋಕಿಸುವ ಬಳಗವೊ೦ದರ ಬಗೆಗೆ ಬರೆಯಬೇಕೆ೦ದಿರುವೆ.
ಕನಸನ್ನು ಬ್ಲಾಗೊಳಗೆ ಬಿಟ್ಟವರಲ್ಲಿ ನೀವೆಷ್ಟಾದರೂ ನನಗಿ೦ತಾ ಸೀನಿಯರ್ :)ಖಂಡಿತ ಸ೦ಶೋದನೆ ನಡೆಸಿ. ನನ್ನ ಕನಸಿನ ವಿಚಾರವನ್ನು ಅಲ್ಲಿ ಉಲ್ಲೀಖಿಸದಿದ್ದರೆ ಅಷ್ಟೆ ಮತ್ತೆ:)
ನಿಮ್ಮ ಕನಸುಗಳನ್ನು ಬ೦ದು ಕಾಣಲು ಕುತೂಹಲ ಮೂಡಿದೆ:)
@ ಶಿವುರವರೆ, ಎರಡೆರಡು ಬಾರಿ ಓದುವ ತೊ೦ದರೆಯನ್ನು ಪ್ರೀತಿಯಿ೦ದ ತೆಗೆದುಕೊ೦ಡಿದ್ದಕ್ಕೆ ಥ್ಯಾಂಕ್ಸ್. ಕನಸು ನನ್ನ ಹಿ೦ದೆ ಬಿದ್ದ ಇಷ್ಟು ವರುಷಗಳ ನ೦ತರ ನಾನು ಅದರ ಬೆನ್ನುಹತ್ತಿದ್ದರೂ ಕೊ೦ಚ ತಡವಾಯಿತೆನಿಸುತ್ತೆ:)
@ಚಿತ್ರಾ ಥ್ಯಾಂಕ್ಸ್. ಆಗಾಗ ಬರುತ್ತಿರಿ.
ಯಾಕೊ.. ಲೇಖನ ಅರ್ದಂಬರ್ದ ಅನ್ನಿಸ್ತು .
ನನಸಿನಲ್ಲಿರದ ಸ್ವಾರಸ್ಯ ಕನಸಿನಲ್ಲೇ ಇರುವುದು... :-)
ಚೆನ್ನಾಗಿ ಬರೆದಿದ್ದೀರ.
ಹಾಯ್,
@ ಸ೦ತೋಷ್ ರವರೆ,
ನಾನು ಬರೆದಿರುವುದೇ ಅರ್ಧ೦ಬರ್ಧ!!ಇದು ನಾನು ದಿನಾ ಎದುರಿಸುವ ವಿಚಿತ್ರ ಸಮಸ್ಯೆಗಳ ಸಣ್ಣ ನೋಟವಷ್ಟೆ. ಅದರೊ೦ದಿಗೆ ಕನಸನ್ನು ವಿಶಿಷ್ಟವಾಗಿ ಅವಲೋಕಿಸುವ ವಿದೇಶಿ ಬಳಗವೊ೦ದರ ಬಗೆಗೆ ಬರೆಯಬೇಕೆ೦ದಿರುವೆ. ನನ್ನ ಸ್ವ- ಅನುಭವಗಳು, ನಮ್ಮ ಸುತ್ತಲಿರುವವರು ಕನಸನ್ನು ಕಾಣುವ ರೀತಿ, ಮತ್ತೆಲ್ಲೋ ನೆಲೆಸಿರುವ ಸ೦ಸ್ಥೆಯೊ೦ದರ ಬಳಿ ಕನಸಿನ ವಿಷಯ ತಿಳಿಸಿ ಅದಕ್ಕೆ ಸ್ಪಷ್ಟನೆ ಪಡೆಯುವ ನನ್ನ ಪ್ರಯತ್ನ ಇವುಗಳ ಬಗೆಗೆ ವಿಸ್ತಾರವಾಗಿ ಮು೦ದೆ ಬರೆಯುತ್ತೇನೆ.
ಹಾ೦, ಯಾರೂ ಏಕೆ ಅರ್ಧವಾಗಿದೆ ಎ೦ದು ಕೇಳಲೇ ಇಲ್ಲವಲ್ಲ ಎ೦ದುಕೊ೦ಡಿದ್ದೆ. ಥ್ಯಾಂಕ್ಸ್ :) ಬರುತ್ತಿರಿ :)
@ ಅರುಣ್ ರವರೆ, ಭೇಟಿಯಿತ್ತಿದ್ದಕ್ಕಾಗಿ ಧನ್ಯವಾದಗಳು .
ಆಗಾಗ ಬರುತ್ತಿರಿ.
ಸುಶ್ಮಾ...
ಚಂದದ ಕನಸುಗಳು..ಇಷ್ಟವಾದವು..
ಇನ್ನಷ್ಟು ಕನಸುಗಳು ಬೀಳಲಿ...
ಧನ್ಯವಾದಗಳು...
Post a Comment