Wednesday, August 19, 2009

ಹೀಗೊಂದು ತರ್ಕ!

ಇದು, ಇತ್ತೀಚಿಗೆ ಮೂಡಿ, ಕಾಡಿದ ಕನಸುಗಳಲ್ಲೊಂದು.

ನಸಿನಲ್ಲಿ ಕಣ್ತೆರೆದಾಗ ಒಂದು ವಿಚಿತ್ರವಾದ ಪರಿಸರದಲ್ಲಿದ್ದೆ. ಪಾಳು ಪಾಳಾದ ಜಾಗದ ನಡುವೆ ಕುರ್ಚಿ, ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ನಾನು ಹೊಸ ಅನುಭವವೊ೦ದರ ವೈಚಿತ್ರ್ಯಕ್ಕೆ ಹೊ೦ದಿಕೊಳ್ಳುವಷ್ಟರಲ್ಲಿ ಗುಂಪೊಂದರ ಶಿಸ್ತಾದ ನಡುಗೆಯ ಸದ್ದು ಕಿವಿತಾಗಿತು. ಅತ್ತ ಕತ್ತು ತಿರುಗಿಸಿ ಒಂದು ಕ್ಷಣ ಸ್ತಬ್ಧವಾಗಿ ಹೋದೆ.'ಶಿರ'ಗಳೇ ಇಲ್ಲದ ಮನುಜರ ಗುಂಪೊಂದನ್ನು ಶಿರವೆತ್ತಿ ನಡೆಯುತ್ತಿದ್ದ ಯುವತಿಯೊಬ್ಬಳು ಮುನ್ನಡೆಸಿಕೊಂಡು ಬರುತ್ತಿದ್ದಳು. ಅವರೆಲ್ಲಾ ಬೆಲೆ ಬಾಳುವ ಉಡುಗೆಗಳನ್ನು ತೊಟ್ಟಿದ್ದರು. ಗುಂಪು ನನ್ನ ಸನಿಹದಲ್ಲೇ ಹಾದು ಹೋಯಿತು. ಆಕೆ ಒಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಮುನ್ನಡೆದಳು. ಎಲ್ಲರೂ ಅಲ್ಲಿಯೇ ಜೋಡಿಸಿದ್ದ ಕುರ್ಚಿಗಳಲ್ಲಿ ಕುಳಿತುಕೊ೦ಡರು.

ಎಲ್ಲವೂ ನನಗೆ ವಿಚಿತ್ರಕ್ಕಿ೦ತ ಹಚ್ಚೇ 'ಕಗ್ಗಂಟಾಗಿ' ಕಂಡಿತು. ಆಕೆ ಅಧಿಕಾರಯುತ ವಾಣಿಯಲ್ಲಿ ನನಗೆ ತಿಳಿಯದ ಕೆಲವು ವಿಷಯಗಳನ್ನು ಕುರಿತು ಎಲ್ಲರನ್ನುದ್ದೇಶಿಸಿ ಮಾತನಾಡಲಾರ೦ಭಿಸಿದಳು. ಹತ್ತಿರದಲ್ಲೇ ಮಂಡಿಯೂರಿ ನಾನು ನೋಡುತ್ತಾ ಕುಳಿತೆ. ಆಕೆ ಏನೇ ವಿಷಯವನ್ನು ಪ್ರಸ್ತಾಪಿಸಿದರೂ, ಮಧ್ಯ ಮಾತು ತುಂಡರಿಸಿ ನಿಲ್ಲಿಸಿದರೂ 'ತಲೆ'ಯಿಲ್ಲದ ಮನುಜರು ಚಪ್ಪಾಳೆ ತಟ್ಟುತ್ತಿದ್ದರು. ಇದು ಹೀಗೇ ಮುಂದುವರೆಯಿತು.

ಚಪ್ಪಾಳೆಗಳು ಎಲ್ಲೆಲ್ಲೂ ಪ್ರತಿಧ್ವನಿಸಿದವು. ಅಷ್ಟರಲ್ಲಿ ಆಕೆ ನನ್ನನ್ನೇ ಸುಧೀರ್ಘವಾಗಿ ನಿಟ್ಟಿಸುತ್ತಾ ತನ್ನ ಎಂದಿನ ಧಾಟಿಯನ್ನು ಕಾಯ್ದುಕೊಂಡು ಹೀಗೆ೦ದಳು.. "ಆತ್ಮಿಯರೇ, ಉನ್ನತ ಆಲೋಚನೆಗಳಿರುವುದೇ ಒಪ್ಪಿಕೊಂಡು ಅನುಸರಿಸಲು. ಅಂತಹುದನ್ನು ಪ್ರಶ್ನಿಸುವ ಧೈರ್ಯ ತೋರುವವರನ್ನು ಶಿಕ್ಷಿಸದೇ ಬಿಡಲಾಗದು." ಆಶ್ಚರ್ಯ, ತುಸು ಗಾಬರಿಗಳೆರಡೂ ನನ್ನನ್ನು ಕಾಡ ಹತ್ತಿದವು. ಆಕೆಯ ಮಾತು ಸಾಗಿತು, "ಅಮೂಲ್ಯ ವಿಚಾರಗಳು ಬೆಂಬಲಿಗರನ್ನು ಗೆಲ್ಲುತ್ತವೆ. ಚಿ೦ತಿಸಬಲ್ಲವ ಮುನ್ನಡೆಸುತ್ತಾನೆ. ಆಗದವ ಹಿಂಬಾಲಿಸುತ್ತಾನೆ. ನಾಯಕತ್ವ ವಹಿಸಲು ಬೆಂಬಲಿಗರೂ ಇಲ್ಲದ, ಹೆಜ್ಜೆ ಸೇರಿಸಲು ಜೊತೆಗಾರರನ್ನೂ ಹೊಂದಿರದ, ಗೊತ್ತು ಗುರಿಯಿಲ್ಲದ ಅಲೆಮಾರಿ ನಮ್ಮ ಸಮಾಜಕ್ಕೆ, ಸಾಮಾಜಿಕ ವ್ಯವಸ್ಥೆಗೇ ಕಳ೦ಕವಿದ್ದ೦ತೆ. ಸ್ನೇಹಿತರೇ, ಇಲ್ಲಿಯೇ ನನಗೊಂದು 'ತಲೆ'ಯಿರುವ ಜೀವಿ ಗೊಚರಿಸುತ್ತಿದೆ!! ಅದು ಕೆಲಸ, ಉದ್ದೇಶವಿಲ್ಲದೆ ಅಲ್ಲಿ ಇಲ್ಲಿ ತಿರುಗಾಡುತ್ತಾ, ಅನಾವಶ್ಯಕವಾಗಿ ಚಿಂತಿಸುತ್ತಿದೆ. ಅದಕ್ಕೆ ತನ್ನ ಅಮೋಘ ಅಭಿವ್ಯಕ್ತಿಯಿ೦ದ ಜನರನ್ನು ಮೆಚ್ಚಿಸಲಿಕ್ಕೂ ಆಗದು, ಇಲ್ಲವೇ ಸುಮ್ಮನೆ ಸಾಮಾಜಿಕವಾಗಿ 'ಶ್ರೇಷ್ಥ'ವೆಂದು ಪರಿಗಣಿತವಾಗಿರುವ ಮೌಲ್ಯಗಳನ್ನು ಅನುಸರಿಸಲೂ ಆಗದು. ನಿಮಗೆ ಕುತೂಹಲವಿದ್ದರೆ ಒಮ್ಮೆ ಅದನ್ನು ನೋಡಿ ಬರಬಹುದು.." ಮಾತು ನಿಂತಿತು. ಚಪ್ಪಾಳೆಗಳು ಆರ್ಭಟಿಸಿದವು. ಆಕೆಯ ನಿಂದನೆ ಆಪಾದನೆಗಳಿ೦ದ ಬೇಸತ್ತು , ಸಾಕೆನ್ನದ೦ಬ೦ತೆ ನನ್ನನ್ನು 'ಅದು' ಎನ್ನುವಷ್ಟರ ಮಟ್ಟಿಗೆ ಸಂಭೋಧಿಸಿದ ರೀತಿಯಿಂದ ಅವಮಾನಿತಳಾಗಿ ನಾನು ಆಕೆಯನ್ನು ವಿರೋಧಿಸ ಬಯಸಿದೆ. ಆಕೆಯ ವಿತ೦ಡವಾದ, ಒಪ್ಪಲಸಾಧ್ಯವೆನಿಸಿದ ತರ್ಕದ ವಿರುದ್ದ ಧನಿಯೆತ್ತ ಬಯಸಿದೆ. ಇಲ್ಲ... ಆಗುತ್ತಿಲ್ಲ ಒಂದು ಪದವನ್ನೂ ಬಾಯಿ ಹೊರಗೆಡುವಲಿಲ್ಲ.ಸಂಪೂರ್ಣವಾಗಿ 'ಮೂಕ'ಳಾಗಿ ಹೋಗಿರುವ೦ತೆನಿಸಿತು. ಅಷ್ಟರಲ್ಲೇ ಅನಿಯಂತ್ರಿತವಾಗಿ ಕಾಲುಗಳು ಹಿಮ್ಮುಖವಾಗಿ ಚಲಿಸಲಾರ೦ಭಿಸಿದವು.... ಹೆಜ್ಜೆಗಳು ಹಿಂದೆ ಹಿಂದೆ.. ಕಡೆಗೆ, ನಿಜವಾಗಲೂ ಕಣ್ತೆರೆದಿದ್ದೆ!

(ಚಿತ್ರ - ಅ೦ತರ್ಜಾಲ)
This dream has been spinned in the online dream group ‘Dream Wheel’

3 comments:

sunaath said...

ಸುಷ್ಮಾ,
ಕನಸಿನ ಲೋಕಕ್ಕೆ ನಮ್ಮನ್ನು ಮತ್ತೆ ಕರೆದೊಯ್ಯುತ್ತಿದ್ದೀಯಾ.
ಈ ಕನಸು ತುಂಬ interesting. ನಿನ್ನ ಕನಸಿನಲ್ಲಿ ಅನೇಕ ಸಲ ಸಣ್ಣ ಗುಂಪುಗಳು ಬರುತ್ತಿರುತ್ತವೆ.ಈ ಗುಂಪಿನಲ್ಲಿ
ತಲೆಭಾಗವಿಲ್ಲದ ಜನರು ಇರುವದು ಅರ್ಥಪೂರ್ಣವಾಗಿದೆ.
ಇನ್ನು, ಈ ಗುಂಪಿನ ನಾಯಕಿಯು ನಿನ್ನ ಮೇಲೆ ವಾಗ್ದಾಳಿಯನ್ನು ಮಾಡುತ್ತಿದ್ದಾಳೆ!
ಆದರೆ ಕನಸಿನಲ್ಲಿಯ ಸಂಕೇತಗಳು ಅನೇಕ ಸಲ personal ಆಗಿರುವದರಿಂದ ಇದರೆಲ್ಲದರ ಅರ್ಥವನ್ನು ನೀನೇ ಹೇಳಬೇಕು!

Sushma Sindhu said...

ಆತ್ಮೀಯ ಕಾಕಾ,
ಪ್ರತಿಕ್ರಿಯೆಗೆ ಧನ್ಯವಾದಗಳು.
ಈ ಕನಸು ವೈಯಕ್ತಿಕವಾದ ಹಲವು ಅ೦ಶಗಳನ್ನು ಒಳಗೊ೦ಡಿರುವುದು ನಿಜವೇ ಆದರೂ ನನ್ನ ಪ್ರಕಾರ ಯಾವುದೇ ಸಾಮಾಜಿಕ ವ್ಯವಸ್ಥೆಯೂ ಒ೦ದಲ್ಲಾ ಒ೦ದು ಹ೦ತದಲ್ಲಿ ನಮ್ಮನ್ನು ತಲೆಯಿದ್ದೂ ಇಲ್ಲದ೦ತೆ ನಡೆಯುವ ಹಿ೦ಬಾಲಕರಾಗಲು ಪ್ರೇರೇಪಿಸುತ್ತದೆ. ಅ೦ತಹ ಸ೦ಧರ್ಭದಲ್ಲಿ ಅಲ್ಲಿ೦ದ ಹೊರಗೆ ನಿ೦ತು ಅವಲೋಕಿಸುವ ಪ್ರಕ್ರಿಯೆಗೆ ಯಾರೇ ತಮ್ಮನ್ನು ಒಡ್ಡಿಕೊಳ್ಳಲು ಯತ್ನಿಸಿದರೂ (ತನಗೆ 'ತಲೆ'ಯಿದೆ ಎ೦ಬ ಅಹ೦ನಿ೦ದಲ್ಲ,! ಸ್ವ೦ತ ಆಲೋಚನೆಗೆ ಹಚ್ಚಿಕೊಳ್ಳುವ ಪ್ರಯತ್ನವಾಗಷ್ಟೇ!) ತಮ್ಮ ಬುದ್ದಿವ೦ತಿಕೆಯೆ೦ದಲೋ ಅಥವಾ ಬರೇ ಮಾತುಗಾರಿಕೆಯಿ೦ದಲೋ ಜನ-ಮನ ಸೆಳೆದ 'ಸಾಮಾಜಿಕ ಪ್ರತಿನಿಧಿಗಳ' ಅವಕೃಪೆಗೊಳಗಾಗಬೇಕಾಗುವುದು ಅನಿವಾರ್ಯವಾಗಿಬಿಡುತ್ತದೆ. ಅ೦ತಹ ತಾಕಲಾಟಗಳುಳ್ಳ 'ವ್ಯಕ್ತಿ'ಯ ಪ್ರತಿನಿಧಿಯೇ ಕನಸಿನ 'ನಾನು' ಎ೦ದು ಭಾವಿಸುತ್ತೇನೆ.
ಈ ಸ೦ಧರ್ಭದಲ್ಲಿ ' Dreem Wheel' ನಲ್ಲಿ ಇದರ ಆ೦ಗ್ಲ ಭಾಷಾ೦ತರ 'A Specious Logic' ಪ್ರಕಟವಾದಾಗ, 'ನನ್ನ ಕನಸು ಇದಾಗಿದ್ದಿದ್ದರೆ' ಎ೦ದು ಭಾವಿಸುತ್ತಾ Tova,Deanna, OOna ನಡೆಸಿದ ಅವಲೋಕನದ ತುಣುಕುಗಳು ಪ್ರಸ್ತುತವೆನಿಸಿಸುತ್ತವೆ-
“I would see it as describing an innerlandscape, feelings of devastation within me”

"To lead is to be ahead, out in front.To follow is to be beheaded.To step backwards is to regress in time.To lead is to get ahead. But part of me doesn't want to do that, it sounds too egotistical. But I don't want to follow either,and be a headless wonder.Neither a lender nor a borrower be. Neither a leader nor a follower be."

“I am initially insulted by her remarks but not enough to confront her for it. "It" is so offensive, I have a name, I am somebody, I want to say to her. But then I wonder again....... ...her insults push me back, away from the personal attack that has played out before me, so that I can have a chance to really take in her thoughts. Her insults are important. If I have been comfortable in accepting what others say without question in wl, "it" maybe time to explore why that is. "It" maybe time to get insulted and let that fuel me into action to care for my whole self. "It" maybe time to see what has been leading me in life so far and then muse about that but only for a short while.”

ಅಂತರ್ವಾಣಿ said...

sushmaa,

tale illada jeevigaLu kanasinalli kaNisive :)

neevu haakiruva chitra noDida mEle kanasu bidditO athava kanasu bidda mEle sookthavaada chitra huDukidirO? aadare tumba chennagi hondutte (chitra haagu kanasu).

ondu vishaya: modalige hELiddeeralla shistaagi baruva janaru.. idu august tingaLaaddarinda bahushya neevu sainikara bagge nenesikondu ee kanasu biddirabahudu.