ನಾನು ಇತ್ತೀಚೆಗಷ್ಟೇ ಬ್ಲಾಗಿನ ನಕಲು ಪುಟ ಗಳನ್ನು ಪತ್ತೆ ಮಾಡುವ ತಾಣವೊ೦ದನ್ನು ನೋಡುತ್ತಿದ್ದೆ. ಅಚ್ಚರಿಯೆ೦ದರೆ ನನ್ನ ಇಂಗ್ಲಿಶ್ ಬ್ಲಾಗಿನಲ್ಲಿ ಪ್ರಕಟಗೊಂಡಿರುವ ಕನಸಿನ ಬರಹವಾದ 'Great Aspirations!!' ಪ್ಯಾ೦ಕಿ ಎಂಬುವವನ ಬ್ಲಾಗಿನಲ್ಲಿ ಸಿಕ್ಕಿತು. ಅಲ್ಲಿ ಅದು ಅವನದೇ ಎ೦ಬ೦ತೆ ಪ್ರಕಟಗೊ೦ಡಿದೆ. ಅಲ್ಲೆಲ್ಲೂ ನನ್ನ ಬ್ಲಾಗಿನ ಲಿ೦ಕಾಗಲೀ, ನನ್ನ ಹೆಸರಾಗಲೀ ಪ್ರಕಟಗೊ೦ಡಿಲ್ಲ.
ಈ ವಿಷಯವನ್ನು ಶ್ರೀಯುತ ಸುನಾಥ್ ರವರ ಗಮನಕ್ಕೆ ತ೦ದಾಗ ಅವರು ತಕ್ಷಣವೇ ಅದನ್ನು ತಮ್ಮ ಬ್ಲಾಗಿನಲ್ಲಿ(http://sallaap.blogspot.com/) ಉಲ್ಲೇಖಿಸಿದ್ದಾರೆ,ಪ್ಯಾ೦ಕಿಯ ಬ್ಲಾಗಿಗೂ ಭೇಟಿಕೊಟ್ಟು ಎಚ್ಚರಿಸಿದ್ದಲ್ಲದೇ ಸೈಬರ್- ಅಪರಾಧ ವಿಭಾಗದ ಗಮನಕ್ಕೆ ತರಲೂ ಯತ್ನಿಸಿದ್ದಾರೆ. ನಿಮ್ಮ ಕಾಳಜಿಗೆ ಅನೇಕಾನೇಕ ಧನ್ಯವಾದಗಳು ಕಾಕಾ:)
ಈ ಕೆಳಗಿನದು ೦೧-೧೦-೦೮ ರಂದು ನಾನು ಬ್ಲಾಗಿಗೆ ಹಾಕಿರುವ ಪೋಸ್ಟ್ http://mydreamwritings.blogspot.com/2008/10/great-aspirations.html
ಹಾಗೂ ಇದನ್ನು ಹಿ೦ಬಾಲಿಸಿದರೆ ಪ್ಯಾ೦ಕಿಯ ತಾಣದಲ್ಲಿ ೧೨-೧೧-೦೮ ರ೦ದು ಪೋಸ್ಟ್ ಆಗಿರುವ ನನ್ನ ಬರಹ ಕಾಣುವಿರಿ!
http://panki-wellstream.blogspot.com/2008/11/great-aspirations.html
ಆದಾಗ ಒಮ್ಮೆ ಮೇಲಿನ ಲಿ೦ಕ ಗಳಿಗೆ ಭೇಟಿಕೊಡಿ.
ನಾವು ಎಚ್ಚರಿಸಿ ದಿನಗಳು ಕಳೆದರೂ ಆತ ಬ್ಲಾಗಿನಿಂದ ಪೋಸ್ಟ್ ಡಿಲೀಟ್ ಮಾಡಿಲ್ಲ, ಹೋಗಲಿ ಕನಿಷ್ಠ ಉತ್ತರವನ್ನಾದರೂ ಬರೆದಿಲ್ಲ.ಹಾಗಾಗಿ ಈಗ ನಮ್ಮ ಬರಹಗಳ ಮೇಲಿನ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಬೇಕಿದೆ.'ಅಸಂಖ್ಯಾತ ಬ್ಲಾಗುಗಳಲ್ಲಿ ನಮ್ಮದನ್ನು ಯಾರು ನೋಡೋರು' ಎ೦ದುಕೊಳ್ಳುವಾಗ ಹೀಗೂ ಆಗಬಲ್ಲದು ಎಂಬುದು ತಿಳಿದದ್ದು ವಿಷಾಧಕರ.
ಹಾ೦..ನಿಮ್ಮ ಬ್ಲಾಗೂ ನಿಮ್ಮ ಅರಿವಿಗೇ ಬಾರದಂತೆ ಬೇರೆ ಯಾರಿಗೂ ಹೆಸರು ತ೦ದಿಕ್ಕುತ್ತಿರಬಹುದು! ಎಚ್ಚರ!
ಏನೇ ಇರಲಿ ನಮ್ಮ ಈ ಪ್ರಯತ್ನದಲ್ಲಿ ನೀವೆಲ್ಲರೂ ಕೈಜೋಡಿಸುತ್ತೀರೆ೦ದು ಭಾವಿಸುತ್ತೇನೆ.
ನಾವು ಎಚ್ಚರಿಸಿ ದಿನಗಳು ಕಳೆದರೂ ಆತ ಬ್ಲಾಗಿನಿಂದ ಪೋಸ್ಟ್ ಡಿಲೀಟ್ ಮಾಡಿಲ್ಲ, ಹೋಗಲಿ ಕನಿಷ್ಠ ಉತ್ತರವನ್ನಾದರೂ ಬರೆದಿಲ್ಲ.ಹಾಗಾಗಿ ಈಗ ನಮ್ಮ ಬರಹಗಳ ಮೇಲಿನ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಬೇಕಿದೆ.'ಅಸಂಖ್ಯಾತ ಬ್ಲಾಗುಗಳಲ್ಲಿ ನಮ್ಮದನ್ನು ಯಾರು ನೋಡೋರು' ಎ೦ದುಕೊಳ್ಳುವಾಗ ಹೀಗೂ ಆಗಬಲ್ಲದು ಎಂಬುದು ತಿಳಿದದ್ದು ವಿಷಾಧಕರ.
ಹಾ೦..ನಿಮ್ಮ ಬ್ಲಾಗೂ ನಿಮ್ಮ ಅರಿವಿಗೇ ಬಾರದಂತೆ ಬೇರೆ ಯಾರಿಗೂ ಹೆಸರು ತ೦ದಿಕ್ಕುತ್ತಿರಬಹುದು! ಎಚ್ಚರ!
ಏನೇ ಇರಲಿ ನಮ್ಮ ಈ ಪ್ರಯತ್ನದಲ್ಲಿ ನೀವೆಲ್ಲರೂ ಕೈಜೋಡಿಸುತ್ತೀರೆ೦ದು ಭಾವಿಸುತ್ತೇನೆ.
ಈ ವಿಚಾರವಾಗಿ ನಿಮ್ಮಲ್ಲಿ ಸಲಹೆ, ಸೂಚನೆಗಳಿದ್ದರೆ ಸದಾ ಸ್ವಾಗತ.
'ಬ್ಲಾಗನ್ನು ರಕ್ಷಿಸಿಕೊಳ್ಳುವುದು ಹೀಗೆ?' ದಯವಿಟ್ಟು ಬರೆಯಿರಿ..
'ಬ್ಲಾಗನ್ನು ರಕ್ಷಿಸಿಕೊಳ್ಳುವುದು ಹೀಗೆ?' ದಯವಿಟ್ಟು ಬರೆಯಿರಿ..
13 comments:
ಥೂ ಈ ರೀತಿ ಕದ್ದು ಬರೀಬೇಕಾ???
ನಾವೆಲ್ಲ Mr. Pankyಯ ತಾಣಕ್ಕೆ ಹೋಗಿ, ಅವನನ್ನು ಖಂಡಿಸೋಣ. ಇದು ನಮ್ಮ ಕರ್ತವ್ಯ.
ಶ್ರೀ ಜೇಮ್ಸ್ ಅವರು ಸುಷ್ಮಾಸಿಂಧುರವರ ಇಂಗ್ಲಿಶ್ ಬ್ಲಾಗ್‌ನಲ್ಲಿ
copygator ಎನ್ನುವ ಪತ್ತೇದಾರಿ ತಾಣದ ವಿಳಾಸ ಕೊಟ್ಟಿದ್ದಾರೆ. ಆಸಕ್ತರು ಅದನ್ನು ಉಪಯೋಗಿಸಿಕೊಳ್ಳಬಹುದು.
ಇಂಥದಕ್ಕೆ ನನ್ನ ತೀವ್ರ ಪ್ರತಿಭಟನೆಯಿದೆ.
ಸುಷ್ಮ ಸಿಂಧು ಮೇಡಮ್,
ನನಗೆ ಈ ವಿಚಾರ ಕೇಳಿ ಸ್ವಲ್ಪ ಮಟ್ಟಿಗೆ ಅತಂಕವುಂಟಾಯಿತು.....ನಮ್ಮ ಬ್ಲಾಗಿನ ಲೇಖನಗಳನ್ನು ಹೀಗೆ ಯಾರಾದರೂ ಮಾಡುತ್ತಿರಬಹುದೇ ಅಂತ....ಇದರ ಬಗ್ಗೆ ನಾವು ಒಟ್ಟಾಗಿ ಏನಾದರೂ ದಾರಿ ಹುಡುಕಬೇಕಾಗಿದೆ...ಈ ವಿಚಾರದಲ್ಲಿ ನಾನು ಜೊತೆಗಿದ್ದೇನೆ......
ಆಹಾಂ , ಮತ್ತೊಂದು ವಿಚಾರ ನನ್ನ ಬ್ಲಾಗಿನಲ್ಲಿ ಕಳೆದ ಬಾರಿ ಭಾವುಕ ಪತ್ರವನ್ನು ಓದಿದಿರಿ...ಈ ಬಾರಿ ಪಕ್ಕ ಹಾಸ್ಯದ ಲೇಖನವಿದೆ....ನಗಲು ಬನ್ನಿ....ಇವೆಲ್ಲಾ ನನ್ನ ಕೆಲಸದಲ್ಲಿ ನಡೆಯುವ ಸತ್ಯಘಟನೆಗಳೂ...ಬರುತ್ತಿರಲ್ಲ...ಥ್ಯಾಂಕ್ಸ್....
ಹಾಯ್,
@ ಸಂದೀಪ್ @ಉದಯ ಇಟಗಿಯವರೇ ಬ್ಲಾಗಿಗೆ ಸ್ವಾಗತ ಹಾಗೂ
ಭೇಟಿಕೊಟ್ಟು ಖಂಡಿಸಿದ್ದಕ್ಕೆ ಧನ್ಯವಾದಗಳು. ಇತ್ತ ಬರುತ್ತಿರಿ.
@ ಕಾಕಾ,
copygator ವಿಳಾಸ ಎಲ್ಲರಿಗೂ ಉಪಯುಕ್ತವಾಗಬಹುದು. ಆ ಸೈಟ್ ಯಾವುದೇ ಲೋಪವಿಲ್ಲದೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಆಗಿರಲಿ ಎ೦ದು ಆಶಿಸುತ್ತೇನೆ.. ವ೦ದನೆಗಳು ಕಾಕಾ :)
@ ಶಿವುರವರೆ,
ಇ೦ತಹ ಘಟನೆ ನಡೆದ ಮೇಲೆ ಅ೦ತರ್ಜಾಲದ ಬಗ್ಗೆ ನ೦ಬಿಕೆಯೇ ಹೊರಟು ಹೋಗುತ್ತಿದೆ. ಆದರೂ ಸುನಾಥ್ ಕಾಕಾ ತೋರಿಸುತ್ತಿರುವ ಕಾಳಜಿ, ನಿಮ್ಮೆಲ್ಲರ ಬೆ೦ಬಲ ಎಲ್ಲವೂ ಮತ್ತೆ ಇತ್ತ ಬರಲು ಪ್ರೇರೇಪಿಸುತ್ತಿವೆ. ಧನ್ಯವಾದ.
ನಿಮ್ಮ ಬ್ಲಾಗಿನೆಡೆಗೆ ಖ೦ಡಿತ ಬರುತ್ತೇನೆ:)
ಸುಷ್ಮಾ,
ಸ್ವಂತಿಕೆಯಿಲ್ಲದಿರುವವರು ಈ ರೀತಿ ಮಾಡುತ್ತಾರೆ...
ಸುಶ್ಮಾ...
ಇದು ಖಂಡಿತ ತಪ್ಪು, ಅಕ್ಷಮ್ಯ ಅಪರಾಧ....
ಇದನ್ನು ತಡೆಗಟ್ಟುವದು ಹೇಗೆ..?
ನಿಮ್ಮ ಪ್ರತಿಭಟನೆಯ ಧ್ವನಿಯಲ್ಲಿ ನಾನೂ ಸೇರುತ್ತೇನೆ...
ಈ ಕಾಪಿ ಸ್ಕೇಪ್ ನಿಂದ ಪ್ರಯೋಜನವಾಗುವುದಿಲ್ಲವೆ?
-ರಂಜಿತ್.
ಹಾಯ್
@ ಜಯ ಶ೦ಕರರವರೆ ನಿಮ್ಮ ಮಾತು ನಿಜ. ಆದರೂ ನಮ್ಮ ಬರವಣಿಗೆಗಳನ್ನು ಮತ್ತೊಬ್ಬರ ಹೆಸರಿನಡಿಯಲ್ಲಿ ನೋಡಿ ಸಹಿಸಿಕೊಳ್ಳುವುದು ಕಷ್ಟವಲ್ಲವೇ.
@ ಪ್ರಕಾಶ್ ಸರ್. ತಮ್ಮ ಕಾಳಜಿಗೆ ಧನ್ಯವಾದಗಳು. ಸದ್ಯ ಸುನಾತ್ ಕಾಕಾ ತಿಳಿಸಿದ೦ತೆ ಸೈಬರ್ ಅಪರಾದದ ವಿಭಾಗಕ್ಕೆ ಮೇಲ್ ಮಾಡಿದ್ದೀನೆ.ಮು೦ದೇನೋ ನೋಡಬೇಕು.
@ ರ೦ಜಿತ ರವರೆ,
ಬ್ಲಾಗ್ ಭೇಟಿಗೆ ಧನ್ಯವಾದಗಳು. ನಾನು ಕಾಪಿ ಸ್ಕೇಪ್ ಅನ್ನು ಬ್ಲಾಗ್ ಶುರು ಮಾಡಿದಾಗಿನಿ೦ದಲೇ ಬಳಸುತ್ತೀದ್ದೀನೆ. ಅಲ್ಲಿ don't copy ಎ೦ದಿದ್ದರೂ ಕಾಪಿ ಕಳ್ಳರು ಕದಿಯದೇ ಉಳಿಸಲಿಲ್ಲವಲ್ಲ! ಆದರೆ ಈ ಕಳುವನ್ನು ನಾನು ಕ೦ಡು ಹಿಡಿದದ್ದೂ ಕಾಪಿ ಸ್ಕೇಪ್ ನೆರವಿನಿ೦ದಲೇ. ಹಾಗೆ೦ದು ಏನೇ ಪ್ರಯತ್ನಿಸಿದರೂ ಸದ್ಯ ನನ್ನ ಕಳುವಾದ ಲೇಖನದ ಬಗೆಗೆ ಸ೦ಭ೦ಧಪಟ್ಟವರ್ಯಾರೂ ಯಾವ ಕ್ರಮವನ್ನು ಕೈಗೊಳ್ಳದಿರುವುದು ನಿರಾಸೆ, ಬೇಸರ ಮೂಡಿಸಿದೆ.
ಸುಷ್ಮ ಸಿಂಧು ಮೇಡಮ್,
ಒಬ್ಬನಿಗೆ ಬರೆಯುವ ಅಹ್ರತೆ ಇಲ್ಲದಾಗ ಬೇರೆಯವರದನ್ನು ಕದ್ದು ಹಾಕಿಕೊಳ್ಳುತ್ತಾರೆ. ಇದು ಖಂಡಿತ ಅಪರಾಧ. ನಿಮ್ಮ ವಿಚಾರಕ್ಕೆ ನನ್ನ ಸಂಪೂರ್ಣ ಬೆಂಬಲ ವಿದೆ.
ಗುರು
@ಗುರು ರವರೆ,
ಬ್ಲಾಗ್ ಗೆ ಸ್ವಾಗತ ಮತ್ತು ನಿಮ್ಮ ಬೆ೦ಬಲಕ್ಕೆ ತು೦ಬಾ ಥ್ಯಾ೦ಕ್ಸ್ :)
ಸುಶ್, ಅಷ್ಟೊಂದು ಆಸಕ್ತಿಯಿಂದ ಪ್ರಾರಂಭಿಸಿದ ನಿನ್ನ ಬ್ಲಾಗನ್ನು ನಿಲ್ಲಿಸುವನ್ತಾಗಿದ್ದಕ್ಕೆ ಬಹಳ ಬೇಸರವಾಗ್ತಿದೆ. ನಿನ್ನ ಅಮೂಲ್ಯಕನಸುಗಳನ್ನು ಅರ್ಥ ಮಾಡಿಕೊಳ್ಳುವಂಥಾ ಓದುಗರು ಸಿಗಲಿ ಎಂದು ಆಶಿಸುವ,
ಸುಪ್ರಜಾ,
Post a Comment