ಇದು ನನ್ನ ಕನಸುಗಳ ತಾಣ. ಹಾಗೆಂದು ಇವು ನಾನು ಕಂಡುಕೊಂಡ ಕನಸುಗಳಲ್ಲ! ತಾವಾಗೇ ಬಂದು ಬಿದ್ದಕನಸುಗಳು! ಈಗ ಐದು ವರುಷಗಳಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ಅದೆಷ್ಟರ ಮಟ್ಟಿಗೆ ಎಂದರೆ ನನ್ನ ಬದುಕಿನ ಅಷ್ಟೂ seriousness ಕನಸುಗಳೊಳಗೆ ತೂರಿ ಹೋಗಿ ನಾನು ನಿರಾಳವಾಗಿಬಿಟ್ಟಿದ್ದೇನೆ! ಮೊದ ಮೊದಲು ಸಲಹೆಯಂತೆ, ಸಮಾಧಾನದಂತೆ ಮೂಡಿ ಬಂದು ನನ್ನಲ್ಲಿ ಸಂದೇಹ ಹುಟ್ಟಿಸುತ್ತಿದ್ದ ಕನಸುಗಳು ನಂತರ 'ನನ್ನಿಂದ' ದೂರವಾಗಿ ನಾನು ಕಾಣದ, ಕೇಳದ ವಿಷಯಗಳನ್ನು ಆರಂಭ, ಅಂತ್ಯಗೊಡನೆ ಹುದುಗಿಸಿ ಕತೆಗಳಾಗಿಬಿಟ್ಟವು.
ಅಮ್ಮನಿಗೆ ಈ ಎಲ್ಲಾ ಕತೆಗಳನ್ನು ಹೇಳುತ್ತಾ record ಮಾಡಲಾರಂಭಿಸಿದವಳು ನಂತರ ಅಮ್ಮನ ಸಲಹೆಯಂತೆ ಬರೆಯಲಾರಂಭಿಸಿದೆ.. ಇಂತಹ ಬರಹಗಳು ನನ್ನನ್ನು ಸಾಕಷ್ಟು 'ಅತ೦ತ್ರ' ಸ್ಥಿತಿಯಲ್ಲೂ ತಳ್ಳಿವೆ........ 'alter ಮಾಡು, ಆರಂಭ ಸರಿಯಿಲ್ಲ, ಅಂತ್ಯ ಸ್ವಲ್ಪ ಬದಲಾಗಬೇಕಿತ್ತು, ಇನ್ನಷ್ಟು ಚೆಂದವೋ, ಬೇರೆಯದೇ ವಿಷಯ ಆಗಿದ್ದಿದ್ದರೆ...' ಎಂದರೆ ನಾನೂ ಏನೂ ಮಾಡಲು ಅಸಹಾಯಕಳು!!! ಕಥೆಯೆ೦ದೋ, ಲಹರಿಯೆ೦ದೋ ಏನೆಂದೋ ಹೆಸರಿಸಲು ಅವಕ್ಕೆ ಅವುಗಳದ್ದೇ ಅದ ಚೌಕಟ್ಟು, ಬದ್ದತೆಗಳಿರುತ್ತವೆ. ಕಡೆಗೆ 'ಎಲ್ಲಿಯೂ ಸಲ್ಲದ' ಅಥವಾ 'ಎಲ್ಲಿಗೂ ಸೇರದ' ಕನಸುಗಳನ್ನು, 'ಕನಸುಗಳು' ಎಂಬ ಶೀರ್ಷಿಕೆಯಡಿಯಲ್ಲಿಯೇ ಆರಾಮವಾಗಿರಿಸೋಣವೆ೦ದರೆ 'ಕನಸುಗಳತಾಣ'ವೆಂದು ಯಾವ ಪತ್ರಿಕೆಯಲ್ಲಿಯೂ ಸ್ಥಾನವಿಲ್ಲ..! ಹಾಗೆಯೇ 'ಕನಸೇ!?' ಎಂಬಂತಹ ಉದ್ಗಾರಗಳಿಗೆ ಸಾಕ್ಷ್ಯಧಾರಗಳ ಸಮೇತ ಉತ್ತರಿಸಲೂ ಸಾದ್ಯವಿಲ್ಲ. ಇಂತಹ ಎಷ್ಟೋ ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ, ಹಲವಾರು ವೈಯಕ್ತಿಕ ಗೊಂದಲಗಳಿಗೆ ಈ ನನ್ನ ಕನಸುಗಳು ನನ್ನನ್ನು ತಳ್ಳಿದರೂ, 'ಆನೆ ನಡೆದದ್ದೇ ದಾರಿ..' ಎನ್ನುವಂತೆ ಅವು ಮು೦ದುವರಿದೇ ಇವೆ!
ಕನಸುಗಳ ಮೂಲ, existenceನ ಬಗ್ಗೆ ತಲೆ ಕೆಡಿಸಿಕೊಳ್ಳುವ ಕಾಲ ಮುಗಿದು, ನನ್ನನ್ನು ಎಲ್ಲೋ ಕರೆದೊಯ್ದು ಬುದ್ದಿಹೇಳಿ, ಮೊಟಕಿ ಮತ್ತೆ ತಂದು ಬಿಡುವ ಪ್ರೀತಿಯ ಕನಸುಗಳು ಬಂದಾಗ 'ಒಹ್..' ಎಂದು ಅಚ್ಚರಿಸುತ್ತಾ, 'ಇದೇ ನನ್ನ ಕಡೆಯ ಕನಸಿರಬೇಕು. ಇನ್ನೆಷ್ಟು ವಿಷಯ ಹೀಗೆ ಬರಲು ಸಾಧ್ಯವಮ್ಮಾ..' ಎಂದು ಎಷ್ಟೋ ವರುಷಗಳಿಂದ ಅಮ್ಮನಿಗೆ ಹೇಳುತ್ತಾ, 'ಸುಮ್ಮನೆ ಬಂದದ್ದನ್ನು ಬರೆದಿಡು' ಎಂದೆನ್ನಿಸಿಕೊ೦ಡು ಗುಡ್ದೆಯಷ್ಟಿರುವ ಸರಕಿನಲ್ಲಿ ಆಗಾಗ್ಗೆ ಒಂದೊಂದನ್ನು ಆಯ್ದು ಬರೆಯುತ್ತಿದ್ದೇನೆ. ಈ ಅನಿಯ೦ತ್ರಿತ thoughts ಗಳನ್ನು 'like dreaming' ಎನ್ನಲಸಾದ್ಯವಾದ್ದರಿ೦ದ 'like minded' ಜನರೊಡನೆ share ಮಾಡಿಕೊಳ್ಳುವ ಬಯಕೆಯಿ೦ದಲೇ 'ಕ೦ಡೆ ನಾನೊಂದು ಕನಸು'ವಿನಲ್ಲಿ ನನ್ನ ಪ್ರಕಟಗೊಂಡಿರುವ ಪುಟ್ಟ ಪುಟ್ಟ 'online reading' ಗೆ ಸರಿಹೊಂದುವ ಕನಸುಗಳನ್ನು ತೆರೆದಿಡುತ್ತಿದ್ದೇನೆ.
~ಸುಷ್ಮ ಸಿ೦ಧು
(image courtesy-web)
3 comments:
you are gifted !! you are a real talent. Every story i read, I wonder how can one get such a dream !! And remembering those dreams and putting those dreams into words !! it certainly needs a talent. great my friend. Wish you keep getting more and more dreams. wish you all the very best.
ಸುಷ್ಮ,
ಮೊದಲು, ಕೊನೆ ಎಲ್ಲಾ ಇದ್ದು, ಲಾಜಿಕಲ್ ಆಗೂ ಇರುವಂಥ ಕನಸುಗಳು ನಿಮಗೆ ಬೀಳ್ತಿರೋದು ಮತ್ತು ನೀವದನ್ನು ಹೀಗೆ ದಾಖಲಿಸುತ್ತಿರೋದು ಎರಡೂ ಒಂತರಾ ವಿಶೇಷ. ಇಂಟರೆಸ್ಟಿಂಗ್ ಆಗಿದೆ. ಹೀಗೇ ಮುಂದುವರೆಸಿ.
-ಮೀರ.
ಹಾಯ್,
ಐದು ವರ್ಷಗಳ ಕನಸಿನ writings ಪೋಸ್ಟ್ ಮಾಡಲು ಬೂಸ್ಟ್ ಮಾಡಿದ್ದೀರ:) many thanks Dhilip and Meera.
~ಸುಷ್ಮ
Post a Comment